ಗಣ ಅಧಿಕಾರ್ (ಅಸ್ಸಾಮೀಸ್: গণ অধিকাৰ) ಈಶಾನ್ಯ ಭಾರತದ ಅಸ್ಸಾಂ ರಾಜ್ಯವನ್ನು ಒಳಗೊಂಡ ಅಸ್ಸಾಮೀಸ್ ಪ್ರಾದೇಶಿಕ ದೈನಂದಿನ ದಿನಪತ್ರಿಕೆ.. ಇದನ್ನು ಗುವಾಹಟಿಯಿಂದ ಪ್ರಕಟಿಸಲಾಗುತ್ತಿದೆ. ಗಣ ಅಧಿಕಾರ್ ಪತ್ರಿಕೆಯು ಯೂನಿಟಿ ಮೀಡಿಯಾ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಒಡೆತನದಲ್ಲಿದೆ.ಈ ಪತ್ರಿಕೆ 1994 ರಲ್ಲಿ ಪಾಕ್ಷಿಕವಾಗಿ ಪ್ರಾರಂಭವಾಯಿತು. ಸಾಮಾನ್ಯ ಜನರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಹೋರಾಡಲು ಅವರ ಮುಖವಾಣಿಯಾಗುವುದು ಗಣ ಅಧಿಕಾರ್ ಪತ್ರಿಕೆಯ ಮುಖ್ಯ ಉದ್ದೇಶವಾಗಿದೆ. [ಉಲ್ಲೇಖದ ಅಗತ್ಯವಿದೆ] ಇದು ಗುವಾಹಟಿ ಮತ್ತು ಪಶ್ಚಿಮ ಅಸ್ಸಾಂನ ಕೆಲವು ಭಾಗಗಳಲ್ಲಿ ಬಲವಾದ ಓದುಗರ ನೆಲೆಯನ್ನು ಹೊಂದಿದೆ ಆದರೆ ಅಪ್ಪರ್ ಅಸ್ಸಾಂನ ಕೆಲವು ಭಾಗಗಳಲ್ಲಿ ನಿಧಾನವಾಗಿ ಪ್ರಾಬಲ್ಯ ಪಡೆಯುತ್ತಿದೆ. [ಉಲ್ಲೇಖದ ಅಗತ್ಯವಿದೆ] ಪತ್ರಿಕೆಯ ಮುಖ್ಯ ಸಂಪಾದಕ ಡಾ. ಝಾಕೀರ್ ಹುಸೇನ್. ಪತ್ರಿಕೆ ತನ್ನ ಆನ್‌ಲೈನ್ ಆವೃತ್ತಿಯನ್ನು ಏಪ್ರಿಲ್ 2011 ರಲ್ಲಿ ಪ್ರಾರಂಭಿಸಿತು. == ಉಲ್ಲೇಖಗಳು ==